ತೂಕದಲ್ಲಿ ಮೋಸ ಮಾಡಿದರೆ ಎಫ್ಐಆರ್ ದಾಖಲಿಸಬೇಕಾಗುತ್ತದೆ
Apr 28 2025, 11:48 PM ISTರೈತರಿಗೆ ತೂಕದಲ್ಲಿ ಮೋಸ ಅಥವಾ ತೊಂದರೆ ಕೊಟ್ಟರೆ ಗುತ್ತಿಗೆದಾರ, ಹಮಾಲಿಗಳ ಮತ್ತು ನಿನ್ನ ಸೇರಿಸಿ, ಹಮಾಲಿಗಳ ಮೇಲೂ ಎಫ್ಐಆರ್ ದಾಖಲಿಸಲು ಸೂಚಿಸಬೇಕಾಗುತ್ತದೆ ಎಂದು ಶಾಸಕ ಎಚ್.ಡಿ.ರೇವಣ್ಣ ರಾಗಿ ಖರೀದಿ ಕೇಂದ್ರದ ಅಧಿಕಾರಿ ಶಾಮಿದ್ ಅಲಿಗೆ ಎಚ್ಚರಿಕೆ ನೀಡಿದರು. ಇಲ್ಲಿಯ ತನಕ ನೀವು ಏನು ಮಾಡಿದ್ದೀರೊ ಗೊತ್ತಿಲ್ಲ, ದೂರು ಬಂದಿದೆ, ತೊಂದರೆ ನೀಡುವ ಹಮಾಲಿಗಳನ್ನು ತೆಗೆದಾಕಿ ಮತ್ತು ಅಗತ್ಯ ಕ್ರಮಕೈಗೊಂಡು ರೈತರಿಗೆ ಅನ್ಯಾಯವಾಗದಂತೆ ಜಾಗ್ರತೆ ವಹಿಸಿ, ಪುನಃ ದೂರು ಬಂದರೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದರು.