ಶಿರಾಡಿಯಲ್ಲಿ ಹೊಳೆಗೆ ಬಿದ್ದ ಕಾರು
Oct 25 2025, 01:00 AM ISTಮೂಲತಃ ಶಿವಮೊಗ್ಗ ಜಿಲ್ಲೆಯ ಗೋವಿಂದ ನಾಯ್ಕ ಎಂಬುವವರು ತಮ್ಮ ಮಗನನ್ನು ಬೆಳ್ತಂಗಡಿ ಬಳಿಯ ಗುರುವಾಯನಕೆರೆಯಲ್ಲಿರುವ ನವೋದಯ ವಸತಿ ಶಲೆಗೆ ಬಿಟ್ಟುಬರೆಲೆಂದು ತಮ್ಮ ಪತ್ನಿ ಹಾಗೂ ಮಗಳ ಜತೆ ಕಾರಿನಲ್ಲಿ ಹೋಗುತ್ತಿದ್ದಾಗ ಮಾರನಹಳ್ಳಿ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ. ಈ ವೇಳೆ ರಸ್ತೆ ಬದಿ ತಡೆಗೋಡೆ ಕೂಡ ಇಲ್ಲದಿದ್ದರಿಂದ ಕಾರು ಸುಮಾರು 80 ಅಡಿ ಆಳದ ಹೊಂಡಕ್ಕೆ ಉರುಳಿಬಿದ್ದಿದೆ. ಇದರಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕಾರು ಉರುಳಿದ್ದನ್ನು ಕಮಡ ಸ್ಥಳೀಯರು ಹಾಗೂ ಚಾಲಕರು ಕೂಡಲೇ ಕೆಳಗಿಳಿದು ಎಲ್ಲರನ್ನೂ ಕಾರಿನಿಂದ ಹೊರಕ್ಕೆ ಕರೆತಂದಿದ್ದಾರೆ.