ಕಾವೇರಿ ನದಿ ನೈರ್ಮಲ್ಯ ಕಾಪಾಡುವಂತೆ ಡಿಸಿಗೆ ಮನವಿ

Aug 17 2025, 01:32 AM IST
ಜಿಲ್ಲಾಧಿಕಾರಿಗಳು ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಪತ್ರ ನೀಡಿ ಮಾತನಾಡಿ, ಇಂತಹ ಪ್ರಸಿದ್ಧ ಪುಣ್ಯಕ್ಷೇತ್ರ, ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರವು ಸಂಗೀತ, ಸಾಹಿತ್ಯ, ಸಾಂಸ್ಕೃತಿಕವಾಗಿ ಯಾತ್ರಾ ಕ್ಷೇತ್ರವಾಗಿ ಬೆಳೆಯುತ್ತಿದ್ದು, ಪ್ರತಿನಿತ್ಯ ಸಹಸ್ರಾರು ಭಕ್ತರು ಇಲ್ಲಿಗೆ ಅಗಮಿಸುತ್ತಾರೆ. ಪವಿತ್ರ ಕಾವೇರಿ ನದಿ ದಿನದಿಂದ ದಿನಕ್ಕೆ ಮಲಿನಗೊಳ್ಳುತ್ತಿದ್ದು ಇದನ್ನು ತಪ್ಪಿಸಲು ಸೂಕ್ತ ಪರಿಹಾರವನ್ನು ಒದಗಿಸಿ ವಾತಾವರಣವನ್ನು ಉತ್ತಮಪಡಿಸುವಂತೆ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿ ಅವರು ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರಲ್ಲಿ ಮನವಿ ಮಾಡಿದರು.