ಕಾವೇರಿ ನದಿ ನೀರಿನ ಮಟ್ಟ ಏರಿಕೆ
May 26 2025, 11:59 PM ISTಮಳೆ ಅರ್ಭಟದಿಂದ ಜನರು ಮನೆಯಿಂದ ಹೊರಹೋಗಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದ ಸಂತೆಯಲ್ಲಿ ದಿನವಿಡೀ ಸುರಿದ ಮಳೆಗೆ ವ್ಯಾಪಾರಸ್ಥರು ಸಮಸ್ಯೆ ಅನುಭವಿಸುವಂತಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ತಮ್ಮ ಜಮೀನಿನಲ್ಲಿ ಬಿತ್ತನೆ ಹಾಗೂ ವ್ಯವಸಾಯ ಮಾಡಲು ಮಳೆ ಅಡ್ಡಿಯಾಗುತ್ತಿದೆ. ಕೆಲವು ರೈತರು ಸುರಿಯುವ ಮಳೆಯಲ್ಲಿಯೇ ಲೆಕ್ಕಿಸದೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಈ ಭಾಗದಲ್ಲಿ ಹೆಚ್ಚು ಬೆಳೆಯುವ ತಂಬಾಕು ಮುಸುಕಿನ ಜೋಳ, ರಾಗಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ಜಲಾವೃತವಾಗಿದ್ದು, ಬೆಳೆಹಾನಿ ಭೀತಿ ಆವರಿಸಿದೆ. ಜಮೀನಿನಲ್ಲಿ ನಿತ್ತಿದ್ದ ನೀರು ಹೊರಕಳಿಸಲು ರೈತರು ಹರಸಾಹಸಪಡುವಂತಾಗಿದೆ.