ಅಂಬೇಡ್ಕರ್ ಜೀವನಾಧಾರಿತ ದಿ ರೂಲರ್ಸ್ ಚಿತ್ರ ತೆರೆಗೆ
Sep 01 2024, 01:50 AM ISTಡಾ. ಞಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದಾರಿದ ದಿ ರೂಲರ್ಸ್ ಚಿತ್ರ ತೆರೆಕಂಡ ಹಿನ್ನೆಲೆಯಲ್ಲಿ ನಗರದ ಪೃಥ್ವಿ ಚಿತ್ರಮಂದಿರದ ಆವರಣದಲ್ಲಿ ಚಿತ್ರತಂಡದಿಂದ ಸಂಭ್ರಮಾಚರಣೆ ನಡೆಸಿದರು. ಸಂವಿಧಾನದ ಶಕ್ತಿ ಎಂಬ ಶೀರ್ಷಿಕೆ ಅಡಿಯಲ್ಲಿ ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದ್ದು, ಅಂತಾರಾಷ್ಟ್ರೀಯ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಕೆಂ ಸಂದೇಶ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಮಾಡಿದ್ದು , ಉದಯ್ ಭಾಸ್ಕರ್ ಅವರು ನಿರ್ದೇಶಿಸಿ ಅಶ್ವತ್ಥ್ ಬೆಳಗೆರೆಯವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.