ಸಮೀವುಲ್ಲಾ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಜಿವಿಟಿ ಬಸವರಾಜು
Aug 30 2024, 01:12 AM ISTನಗರದ ಪ್ರಥಮ ಪ್ರಜೆಯಾದ ಸಮಿವುಲ್ಲಾರವರು ಈಗ ಯಾವ ಪಕ್ಷದಲ್ಲಿದ್ದಾರೆ, ಕಳೆದ ವಿಧಾನಸಭಾ-ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆ ಯಾರ ಜೊತೆ ಇದ್ದೀರೆಂದು ತಿಳಿಯದ? ಅರಸೀಕರೆ ಜನತೆ ದಡ್ಡರಲ್ಲ. ಶಾಸಕರ ಜೊತೆ ಸೇರಿ ಹಣಬಲ ಮತ್ತು ಕುತಂತ್ರ ಮಾರ್ಗದಿಂದ ನಗರಸಭಾ ಅಧ್ಯಕ್ಷರಾಗಿರುವ ನೀವು ಕಳೆದ ಬಾರಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರದಲ್ಲಿ ನಡೆದ ರಸ್ತೆ ಒಳಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದೀರಿ ಎಂದು ಜಿವಿಟಿ ಬಸವರಾಜು ನೇರವಾಗಿ ಆರೋಪಿಸಿದರು.