ಗ್ರಾಮೀಣರ ಆಶಾಕಿರಣ ಬಾಡಗಂಡಿ ಆಸ್ಪತ್ರೆ: ಎಸ್.ಆರ್.ಪಾಟೀಲ
Jun 25 2025, 12:33 AM ISTಉತ್ತರ ಕರ್ನಾಟಕ ಭಾಗದ 14 ಜಿಲ್ಲೆಯ ಜನರು ದೂರದ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗಿ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದು ಕಷ್ಪವಾಗುತ್ತಿದೆ. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿನ ಬಡಜನರ ಆರೋಗ್ಯ ಕಾಳಜಿಗಾಗಿ ಬೆಂಗಳೂರಿನ ನುರಿತ ವೈದ್ಯರೇ ಬೀಳಗಿ ತಾಲೂಕಿನ ಬಾಡಗಂಡಿ ಆಸ್ಪತ್ರೆಗೆ ಬಂದು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಮನವಿ ಮಾಡಿದರು.