ಪ್ರಯಾಸ ಪಟ್ಟು ಗೆದ್ದಿತ್ತು ಕಾಂಗ್ರೆಸ್
Apr 07 2024, 01:50 AM ISTಬಾಗಲಕೋಟೆ: ಸ್ವಾತಂತ್ರ್ಯದ ನಂತರ ನಡೆದ ಎಲ್ಲ ಲೋಕಸಭೆ ಚುನಾವಣೆಗಳಲ್ಲೂ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸುಳಿದ ಬಾಳೆಹಣ್ಣಿನಂತೆ ಇತ್ತು. ಆದರೆ, 1984ರಲ್ಲಿ ನಡೆದ ಚುನಾವಣೆಯಲ್ಲಿ ಮಾತ್ರ ಪ್ರಯಾಸದ ಗೆಲವು ಕಂಡಿತು. ಅದಕ್ಕೆ ಹತ್ತು ಹಲವಾರು ಕಾರಣಗಳಿದ್ದವು. 1984 ಇಸವಿ ಭಾರತದ ಇತಿಹಾಸದಲ್ಲಿ ಕರಾಳ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಆ ವರ್ಷ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಡೆಯಿತು. ಇದು ರಾಜಕೀಯದ ಮೇಲೂ ಪ್ರಭಾವ ಬೀರಿತು. ಇಂದಿರಾ ಹತ್ಯೆಯಿಂದಾಗಿ 7ನೇ ಲೋಕಸಭೆಯ ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜಿಸಲ್ಪಟ್ಟಿತ್ತು.