ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಆನಂದ್ ಕಾಳೇನಹಳ್ಳಿ ಆಕ್ರೋಶ
Dec 05 2024, 12:32 AM ISTಹಾಸನ ಜಿಲ್ಲೆಯಲ್ಲಿ ಗುರುವಾರ ನಡೆಯುವ ಕಾಂಗ್ರೆಸ್ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ದುರುದ್ದೇಶದಿಂದ ಕೂಡಿದೆ. ಈ ಸಮಾವೇಶಕ್ಕೆ ಕೋಟ್ಯಾಂತರ ರು. ಹಣವನ್ನು ವಿನಿಯೋಗ ಮಾಡುವ ಬದಲು ಸರ್ಕಾರಿ ಶಾಲೆ, ರಸ್ತೆ, ಆಸ್ಪತ್ರೆಗಳು ಹಾಗೂ ಸ್ಥಳೀಯ ಶಾಸಕರಿಗೆ ಅನುದಾನ ನೀಡಿದರೆ ಆದಷ್ಟು ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಅದನ್ನು ಹೊರತುಪಡಿಸಿ ಇಂದು ಹಾಸನ ಜಿಲ್ಲೆಗೆ ಆಗಮಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಾಭಿಮಾನದ ಸಮಾವೇಶ ನಡೆಸುತ್ತಿರುವುದು ಸರಿಯಲ್ಲ ಎಂದು ಕೆಂಪೇಗೌಡ ವೇದಿಕೆ ರಾಜ್ಯಾಧ್ಯಕ್ಷ ಆನಂದ್ ಕಾಳೇನಹಳ್ಳಿ ಕಿಡಿಕಾರಿದರು.