• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್ ಮಾಡೇ ಮಾಡ್ತೀವಿ: ಮಂಡ್ಯದಲ್ಲಿ ಶಾಸಕ ರವಿಕುಮಾರ್ ಗಣಿಗ

May 20 2025, 01:10 AM IST
ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಹೋರಾಟ ಮಾಡುತ್ತೇವೆ ಎಂದು ಅಭಿವೃದ್ಧಿಗೆ ವಿರೋಧ ಮಾಡಬಾರದು. ಹೋರಾಟ ಮಾಡುವುದಾದರೆ ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಲಿ. ಅಭಿವೃದ್ಧಿ ವಿಚಾರವಾಗಿ ಹೋರಾಟ ಮಾಡಲಿ. ಸುಖಾ ಸುಮ್ಮನೆ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್‌ಗೆ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ .

ಕಾವೇರಿ ಶಿಕ್ಷಣ ಸಂಸ್ಥೆ: 413 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

May 20 2025, 01:04 AM IST
ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ 128 ನರ್ಸಿಂಗ್‌, 38 ಸೆಂಟ್‌ ಆಲ್ಪೋನ್ಸಾ ನರ್ಸಿಂಗ್‌, 68 ಫಿಜಿಯೋಥೆರಪಿ, 144 ಅಲೈಡ್‌ ಹೆಲ್ತ್‌ಸೈನ್ಸ್‌ ಹಾಗೂ 35 ಫಾರ್ಮಸಿ ವಿದ್ಯಾರ್ಥಿಗಳು ಸೇರಿ ಒಟ್ಟು 413 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ನಮಗೆ ಕುಡಿಯಲು ಕಾವೇರಿ ನೀರು ಕೊಡಿ..!

May 18 2025, 01:57 AM IST
ಕೆಎಚ್‌ಬಿ ಬಡಾವಣೆ ನಿರ್ಮಾಣ ಮಾಡಿ ೨೦ ವರ್ಷ ಕಳೆದರೂ ಈವರೆಗೂ ಬಡಾವಣೆ ಜನರಿಗೆ ಕುಡಿಯುವ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ೨೦೧೯ರಲ್ಲಿ ಕರ್ನಾಟಕ ಗೃಹಮಂಡಳಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಿದೆ. ಕಳೆದ ೬ ವರ್ಷಗಳಿಂದ ಬಡಾವಣೆ ನಿವಾಸಿಗಳು ಕಂದಾಯ ಕಟ್ಟುತ್ತಿದ್ದಾರೆ. ಆದರೆ, ಈವರೆಗೂ ನಗರಸಭೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ.

ಕಾವೇರಿ ಆರತಿಗೆ ಸಮರೋಪಾದಿಯಲ್ಲಿ ಸಿದ್ಧತೆ

May 15 2025, 07:01 AM IST

ಮಂಡ್ಯದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಗಾಗಿ ತೇಲುವ ಸೇತುವೆ, ವೀಕ್ಷಕರ ಗ್ಯಾಲರಿ, ಲೇಸರ್ ಶೋದಂತ ಪ್ರದರ್ಶನ ಏರ್ಪಡಿಸುವುದು ಸೇರಿ ಸಕಲ ಸಿದ್ಧತೆ ಎಲ್ಲ ಇಲಾಖೆಗಳು ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕಾವೇರಿ ಆರತಿ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ.

ಕೆಆರ್‌ಎಸ್‌ ಬಳಿ ಕಾವೇರಿ ಆರತಿಗೆ 100 ಕೋಟಿ ರು. ಮೀಸಲು : ಡಿಕೆಶಿ

May 10 2025, 06:17 AM IST

ರಾಜ್ಯ ಸರ್ಕಾರ ಕೆಆರ್‌ಎಸ್‌ ಬಳಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನೀರಾವರಿ ಇಲಾಖೆಯಿಂದ ಸುಮಾರು 100 ಕೋಟಿ ರು. ಮೀಸಲಿಟ್ಟಿದೆ. ದಸರಾ ವೇಳೆಗೆ ಕಾವೇರಿ ಆರತಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

1000 ರು.ಕೊಟ್ರೆ ಸಣ್ಣ ಮನೆಗೆ ಕಾವೇರಿ ನೀರು : ಡಿ.ಕೆ.ಶಿವಕುಮಾರ್‌

May 10 2025, 02:04 AM IST
ಟ್ಯಾಂಕ್‌ ನೀರಿನ ಮಾಫಿಯಾಕ್ಕೆ ಕಡಿವಾಣ ಹಾಕಲು ಮತ್ತು ಪ್ರತಿ ಮನೆಗೂ ಸರಳವಾಗಿ ನೀರಿನ ಸಂಪರ್ಕ ದೊರಕಿಸುವ ನಿಟ್ಟಿನಲ್ಲಿ ರೂಪಿಸಿರುವ ‘ಸರ್ವರಿಗೂ ಸಂಚಾರಿ ಕಾವೇರಿ ಮತ್ತು ಮನೆ ಮನೆಗೂ ಸರಳ ಕಾವೇರಿ’ ಯೋಜನೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಶುಕ್ರವಾರ ವಿಧಾನಸೌಧ ಮುಂಭಾಗ ಚಾಲನೆ ನೀಡಿದರು.

ಅರ್ಧಕ್ಕೆ ನಿಂತ ರಾಮನಾಥಪುರದ ಕಾವೇರಿ ನದಿ ಸೇತುವೆ ಕಾಮಗಾರಿ

May 09 2025, 12:31 AM IST
ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯ ಸೇತುವೆ ಶತಮಾನ ಪೂರೈಸಿದೆ. ಹಳೆಯ ಸೇತುವೆ ಕಿರಿದಾಗಿದ್ದು, ಶಿಥಿಲಾವಸ್ಥೆಗೆ ತಲುಪಿದ ಕಾರಣ ಕಳೆದ 2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಹಾಗೂ ಶಾಸಕ ಎ. ಮಂಜು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಹೊಸ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರ 24 ಕೋಟಿ ರು. ವೆಚ್ಚದ ಅನುದಾನ ಬಿಡುಗಡೆ ಮಾಡಿತ್ತು. ದುರಾದೃಷ್ಟವಶಾತ್ ದೇವರು ಕೊಟ್ಟರೂ ಪೂಜಾರಿ ವರ ಕೊಡಲ್ಲ ಎನ್ನುವ ಗಾದೆ ಮಾತಿನಂತೆ ಸರ್ಕಾರ ದೊಡ್ಡ ಮೊತ್ತದ ಅನುದಾನ ನೀಡಿದರೂ ಕಾಮಗಾರಿ ಮುಗಿಯದೆ ನನೆಗುದಿಗೆ ಬಿದ್ದಿದೆ.

ಕಾವೇರಿ ನದಿಗೆ ಮಹಶಿರ್‌ ಮೀನು ಮರಿಗಳು

May 08 2025, 12:32 AM IST
ಇಲ್ಲಿಯ ರಾಮೇಶ್ವರಸ್ವಾಮಿ ದೇವಸ್ಥಾನದ ಕಾವೇರಿ ನದಿ ವಹ್ನಿ ಪುಕ್ಷರಣಿಯ ಎರಡು ಬದಿಯ ಒಂದು ಪರ್ಲಾಂಗ್ (200 ಮೀಟರ್ ) ನದಿಯನ್ನು ಮತ್ಸ್ಯ ಸಂರಕ್ಷಿತ ಪ್ರದೇಶ ಎಂದು ಮೈಸೂರು ಮೀನುಗಾರಿಕೆ ಇಲಾಖೆ ಆರ್‌. ಗಣೇಶ್ ತಿಳಿಸಿದರು. ಈ ಕ್ಷೇತ್ರದಲ್ಲಿ ಬರುವ ಭಕ್ತರು ಸಂರಕ್ಷಿತ ಮೀನುಗಳಿಗೆ ಪುರಿ, ಕಡಲೆಕಾಯಿ, ಹಿಂಡಿ ಮುಂತಾದ ಅಹಾರವನ್ನು ಹಾಕಬಹುದು. ಈ ಸ್ಥಳದಲ್ಲಿ ಪ್ಲಾಸ್ಟಿಕ್, ಗೋಣಿಚೀಲ, ಕಸ ಕಡ್ಡಿ ಬಟ್ಟೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹಾಕಬಾರದು. ಈ ನಿಯಮ ಉಲ್ಲಂಘನೆ ಮಾಡಿದರೆ ಶಿಕ್ಷಗೆ ಗುರಿ ಪಡಿಸಲಾಗುವುದು ಎಂದು ಗಣೇಶ್ ತಿಳಿಸಿದರು.

ಜೀವನದಿ ಕಾವೇರಿ ಸಾಕ್ಷ್ಯಚಿತ್ರ: ಪ್ರಥಮ ಪ್ರದರ್ಶನ ಹೌಸ್‌ಪುಲ್‌

May 07 2025, 12:52 AM IST
ಜೀವನದಿ ಕಾವೇರಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡ ಚಿತ್ರಮಂದಿರ ಹೌಸ್‌ಪುಲ್‌ ಆಗಿರುವುದು.

ಕಾವೇರಿ ನದಿಯಲ್ಲಿ ಮಂಟಪೋತ್ಸವ

May 05 2025, 12:51 AM IST
ಇಲ್ಲಿಯ ಕಾವೇರಿ ನದಿಯ ತಟದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಶ್ರೀ ರಾಮರ ಪರಿವಾರ ಸಮೇತ ಪ್ರತಿಷ್ಠಾಪಿಸಿ, ಕಾವೇರಿ ನದಿ ನೀರಿನ ಮಧ್ಯೆ ಭಾಗದಲ್ಲಿ ಚಲುಸುತ್ತಿದ್ದ, ತೆಪ್ಪದಲ್ಲಿ ವಿದ್ಯುತ್ ದೀಪ ಹಾಗೂ ಹೂಗಳಿಂದ ಶ್ರೀಂಗರಿಸಿದ ಮಂಟಪವೂ ಜನರ ಮನ ಸೆಳೆಯಿತು. . ಬಂದಂತಹ ಭಕ್ತರುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ಮುಖ್ಯ ಅರ್ಚಕರು ಶ್ರೀನಿವಾಸ್, ಉಮೇಶ್, ರಘು, ಎಂ.ಎನ್. ಕುಮಾರಸ್ವಾಮಿ, ಕಾಳಬೋಯಿ, ಕೇಶವ, ಸಿದ್ದರಾಜು ಮುಂತಾದವರು ಇದ್ದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 36
  • next >

More Trending News

Top Stories
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved