ರೈಲ್ವೆ ಪೊಲೀಸರ ಕಿರುಕುಳ ಖಂಡಿಸಿ ಗುಜರಿ ವ್ಯಾಪಾರಿಗಳ ಪ್ರತಿಭಟನೆ
Mar 25 2025, 12:45 AM ISTಬೆಂಗಳೂರಿನ ಯಶವಂತಪುರ ಹಾಗೂ ಹಾಸನದ ರೈಲ್ವೆ ಪೊಲೀಸರು ರೈಲ್ವೆ ಇಲಾಖೆಗೆ ಸೇರಿದ ಉಪಕರಣಗಳನ್ನು ಖರೀದಿ ಮಾಡಿರುತ್ತೀರಾ ಎಂದು ನಮಗೆ ಪದೇ ಪದೆ ಕಿರುಕುಳ ನೀಡಿ ನಮ್ಮಿಂದ ಹಣ ಪಡೆಯುತ್ತಿರುತ್ತಾರೆ. ಇದೇ ರೀತಿ ಇಲ್ಲಿನ ಪೊಲೀಸರು ಕೂಡ ಹಣ ವಸೂಲಿ ಮಾಡುತ್ತಿದ್ದು, ನಾವು ದುಡಿದಂತಹ ಹಣವನ್ನೆಲ್ಲಾ ಈ ಮೇಲ್ಕಂಡ ಪೊಲೀಸರಿಗೆ ಕೊಡುತ್ತಿದ್ದು, ಬಡ್ಡಿ ಸಾಲ ಮಾಡಿ ಹಣ ನೀಡಿರುತ್ತೇವೆ ಎಂದು ಗುಜರಿ ವ್ಯಾಪಾರಸ್ಥರು ಆರೋಪಿಸಿ ಪ್ರತಿಭಟಿಸಿದರು.