ಕೃಷಿ ಇಲಾಖೆ ಅಧಿಕಾರಿಯಿಂದ ಆರ್ ಟಿಜಿಎಸ್ ಪ್ರಮಾದ
Dec 15 2024, 02:02 AM ISTನಿಯಮ ಉಲ್ಲಂಘಿಸಿ ಎಡಿಎ ಮತ್ತು ಎಇ ಖಾತೆಗೂ 88,000 ಆರ್ ಟಿ ಜಿ ಎಸ್ ಆಗಿದ್ದು ಇದು ಪಾರದರ್ಶಕವೇ ಎಂದು ತನಿಖೆಯಿಂದ ದೃಢಪಡಬೇಕಿದೆ. ಡೇ ಬುಕ್ ನಲ್ಲಿ ತಮ್ಮ ಲೋಪ ಬೆಳಕಿಗೆ ಬರುತ್ತಿದ್ದಂತೆ ಹೊಸ ಪುಸ್ತಕ ಇರಿಸಿ ತಿದ್ದುಪಡಿ ಮಾಡಿಸಿರುವ ವಿಚಾರವೂ ಬೆಳಕಿಗೆ ಬಂದಿದ್ದು ಕೆಲ ಕಂಪನಿಗಳ ಸಿಬ್ಬಂದಿ ನಮ್ಮ ಕಂಪನಿಗೆ ಹೆಚ್ಚು ಹಣ, ಮತ್ತು ಕಡಿಮೆ ಹಣವನ್ನು ಎಇ ಅವರೇ ಕಳುಹಿಸಿ ನಂತರ ಕರೆ ಮಾಡಿ ವಾಪಸ್ಸು ತರಿಸಿಕೊಂಡಿದ್ದಾರೆ ಎಂಬ ಮಾತುಗಳನ್ನಾಡಿರುವ ಕುರಿತು ಆಡಿಯೋ ಕೂಡ ವೈರಲ್ ಆಗಿದೆ.