ಶ್ರೀಕ್ಷೇತ್ರದಿಂದ ಮಹಿಳೆಯರು ಮುಖ್ಯವಾಹಿನಿಗೆ ಕರೆತರುವ ಕೆಲಸ: ತಿಲಕ್ ರಾಜ್
Jul 20 2025, 01:15 AM ISTಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗೆ ಸ್ವಚ್ಛತೆ, ಆರೋಗ್ಯ, ಕಾನೂನು, ಸರ್ಕಾರಿ ಸೌಲಭ್ಯ, ಸ್ವ-ಉದ್ಯೋಗ ಮುಂತಾದ ವಿಚಾರಗಳ ಬಗ್ಗೆ ಪ್ರತಿ ತಿಂಗಳು ಮಾಸಿಕ ಸಭೆಗಳಲ್ಲಿ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಗಳಿಂದ ಕೊಡಿಸಲಾಗುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ ಡಾ.ಹೇಮಾವತಿ ಅಮ್ಮನವರ ಕನಸನ್ನು ಯೋಜನೆ ಮೂಲಕ ನನಸು ಮಾಡಲಾಗುತ್ತಿದೆ.