ಸ್ಪಂದನ ಸಂಸ್ಥೆಯ ಕೆಲಸ ಇತರರಿಗೆ ಮಾದರಿ: ಡಾ. ಮಣಿಕಾಂತ್
May 08 2025, 12:33 AM ISTಕೊಪ್ಪ, ಸ್ಪಂದನ ಸಂಸ್ಥೆ ಕಳೆದ ಕೋವಿಡ್ ಸಂದರ್ಭದಿಂದಲೂ ವೈದ್ಯಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕರಾಟೆ ಶಿಬಿರ ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ತನ್ನ ಕೆಲಸ ಆರಂಭಿಸಿದೆ. ಇಂತಹ ಸಂಸ್ಥೆಗಳ ಕೆಲಸವನ್ನು ಮಾದರಿಯಾಗಿಟ್ಟುಕೊಂಡು ಯುವಕರ ಗುಂಪು ಸಮಾಜ ಕಾರ್ಯದಲ್ಲಿ ತೊಡಗಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಸರೀಕಟ್ಟೆ ಪಶು ವೈದ್ಯಾಧಿಕಾರಿ ಡಾ. ಮಣಿಕಾಂತ್ ಹೇಳಿದರು.