ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್: ಡಾ.ಮಲ್ಲಿಕಾರ್ಜುನ ಜರಕುಂಟಿ
Jan 24 2024, 02:00 AM ISTಮುಧೋಳ: ನೇತಾಜಿ ಸುಭಾಷ್ ಚಂದ್ರಬೋಸ್ ಈ ಹೆಸರು ಕೇಳಿದ ತಕ್ಷಣ ದೇಶ ಪ್ರೇಮದ ಕಿಚ್ಚು ಇನ್ನಷ್ಟು ಜಾಗೃತವಾಗುತ್ತದೆ, ಸಿಡಿಲಬ್ಬರದ ಘೋಷಣೆಗಳು ನೆನಪಾಗುತ್ತವೆ. ಪ್ರಖರ ಚಿಂತನೆಗಳು ಸ್ಮೃತಿ ಪಟಲದಲ್ಲಿ ಸುಳಿದಾಡುತ್ತವೆ ಎಂದು ಡಾ.ಮಲ್ಲಿಕಾರ್ಜುನ ಜರಕುಂಟಿ ಹೇಳಿದರು. ಸ್ಥಳೀಯ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಮಂಗಳವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುಭಾಷ್ ಚಂದ್ರ ಬೋಸ್ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು.