ಕಾವ್ಯಕ್ಕೆ ಬಹಳಷ್ಟು ಮಹತ್ವವಿದೆ, ಕಾವ್ಯಕ್ಕೆಜೀವನದ ಅನುಭವ ಬೇಕು: ಡಾ.ಶರತ್ ಚಂದ್ರ ಸ್ವಾಮೀಜಿ
May 27 2024, 01:06 AM ISTಪ್ರತಿ ಲೇಖಕರಿಗೂ ಜೀವನ ಅನುಭವದ ಅರಿವು ಹಾಗೂ ಕವಿತ್ವ ಎರಡು ಮುಖ್ಯ. ಕಾವ್ಯದ ರೂಪದ ಪ್ರತಿಬೆ ಪುಷ್ಪವಾಗಿ ಅರಳಿದ್ದು, ಲೇಖಕ ದೇವಣ್ಣ ಹೊಸಕೋಟೆಯವರು ನಮಗೆ ಎರಡು ಕೃತಿಗಳ ಮದ್ದು ನೀಡಿದ್ದಾರೆ. ಅಲ್ಲಮ ಮಹಾನ್ತತ್ವಜ್ಞಾನಿ. ಅಲ್ಲಮ ಚರಿತಾಮೃತ ಕೃತಿಯಲ್ಲಿ ಅವರ ಬಗೆಗಿನ ಜೀವನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಭಾಷಾ ಶೈಲಿ ಚೆನ್ನಾಗಿ ಮೂಡಿ ಬಂದಿದೆ. ನಡುಗನ್ನಡ ಸ್ವರೂಪದಲ್ಲಿ ಕಾವ್ಯವಿದ್ದು, ಪ್ರಸಂಗಗಳನ್ನು ಬಹಳ ಭಿನ್ನವಾಗಿ ಹೇಳಿದ್ದಾರೆ.