ಮುಸ್ಲಿಂ ಪಂಗಡಗಳ ಜಗಳ: ಡಿವೈಎಸ್ಪಿ, ಎಸಿ ನೇತೃತ್ವದಲ್ಲಿ ಶಾಂತಿ ಸಭೆ
Aug 25 2024, 01:45 AM ISTಮುಸ್ಲಿಂ ಸಮುದಾಯದಲ್ಲಿರುವ ಸುನ್ನಿ ಜಮಾತ್ ಹಾಗೂ ತಬ್ಲಿಕ್ ಪಂಗಡಗಳ ನಡುವೆ ನಮಾಜು ಮತ್ತು ಇತರೆ ಧಾರ್ಮಿಕ ಆಚರಣೆ ಕುರಿತಂತೆ ಉಂಟಾದ ಗೊಂದಲ, ಮುಸುಕಿನ ಗುದ್ದಾಟಗಳ ಹಿನ್ನೆಲೆ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಡಿವೈಎಸ್ಪಿ ಮತ್ತು ಉಪವಿಭಾಗಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಎರಡೂ ಪಂಗಡಗಳ ಮುಖಂಡರನ್ನು ಕರೆಯಿಸಿ ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಪರಸ್ಪರ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಸಲಹೆ-ಸೂಚನೆ ನೀಡಿದರು.