ಚಿಕ್ಕಮಗಳೂರಿನ ಜೈನ ಸಂಘದಿಂದ ತೀರ್ಥಂಕರ ಮೂರ್ತಿಗಳಿಗೆ ಮಸ್ತಕಾಭಿಷೇಕ
Dec 31 2024, 01:02 AM ISTಶಿವಪುರ ಕಾವಲಿನ ಜೈನರಗುತ್ತಿಯಲ್ಲಿ ವಿರಾಜಮಾನವಾಗಿರುವ 31 ಅಡಿ ಎತ್ತರದ ಮುನಿಸುವ್ರತ ತೀರ್ಥಂಕರ ಹಾಗೂ 24 ಅಡಿ ಎತ್ತರದ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಶೀತಲನಾಥ ತೀರ್ಥಂಕರ ಮೂರ್ತಿಗಳಿಗೆ ಚಿಕ್ಕಮಗಳೂರು ಜೈನ ಸಮಾಜದಿಂದ ಮಹಾಮಸ್ತಕಾಭಿಷೇಕ ನೆರವೇರಿತು. ದಿಗಂಬರ ಜೈನಮುನಿ ವೀರಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ನಡೆದ ವೈಭವದ ಮಸ್ತಕಾಭಿಷೇಕವನ್ನು ಚಿಕ್ಕಮಗಳೂರು ಜೈನ ಸಮಾಜದವರು ಮಾತ್ರವಲ್ಲದೆ, ವಿವಿಧೆಡೆಯಿಂದ ಆಗಮಿಸಿದ ಜಿನ ಭಕ್ತರು ವೀಕ್ಷಿಸಿದರು.