ಚುನಾವಣೆ ಹಿನ್ನೆಲೆ ಮತಪಟ್ಟಿಗೆ ಹೆಸರು ಸೇರ್ಪಡೆ, ಆಕ್ಷೇಪಣೆ ಸಲ್ಲಿಸಿ: ತಹಸೀಲ್ದಾರ್
Nov 24 2023, 01:30 AM ISTಶಿಕ್ಷಕರ ಕ್ಷೇತ್ರದ ಮತದಾನಕ್ಕಾಗಿ ಕಡ್ಡಾಯವಾಗಿ 3 ವರ್ಷ ಸೇವೆ ಸಲ್ಲಿಸಿರಬೇಕು. ಪ್ರಸ್ತುತ ಮತಕ್ಷೇತ್ರದಲ್ಲಿ 225 ಪುರುಷ ಹಾಗೂ 185 ಮಹಿಳಾ ಮತದಾರರು ಸೇರಿದಂತೆ ಒಟ್ಟು 410 ಮತದಾರರಿದ್ದಾರೆ. ಪದವೀಧರರ ಕ್ಷೇತ್ರದಲ್ಲಿ 1,505 ಪುರುಷ ಹಾಗೂ 1,307 ಮಹಿಳಾ ಮತದಾರರು, ಇತರೆ 1 ಸೇರಿದಂತೆ ಒಟ್ಟು 2813 ಮತದಾರರಿದ್ದಾರೆ. ಕ್ಷೇತ್ರದಲ್ಲಿ 5 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಹೊಳೆಹೊನ್ನೂರಿನಲ್ಲಿ 1, ಬಿ.ಆರ್.ಪಿ 1 ಹಾಗೂ ನಗರ ವ್ಯಾಪ್ತಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.