ಅಕ್ಟೋಬರ್ ೨೪ರಿಂದ ಹಾಸನಾಂಬೆ ದರ್ಶನ
Aug 14 2024, 12:47 AM IST ಈ ವರ್ಷ ಹಾಸನಾಂಬೆ ಜಾತ್ರೋತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ೧೧ ದಿನ ಹಾಸನಾಂಬ ಬಾಗಿಲು ತೆಗೆಯಲಿದೆ, ಆದರೆ ಭಕ್ತಾದಿಗಳಿಗೆ ಮೊದಲ ದಿನ ಮತ್ತು ಕೊನೆಯ ದಿವಸದಂದು ದರ್ಶನಕ್ಕೆ ಅವಕಾಶ ಇರುವುದಿಲ್ಲ. ೯ ದಿನಗಳ ಕಾಲ ಸಾರ್ವಜನಿಕರಿಗೆ ದೇವಿ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು. ಹಾಸನಾಂಬ ಜಾತ್ರೋತ್ಸವದ ಅಂಗವಾಗಿ ದೇವಾಲಯದ ಬಾಗಿಲನ್ನು ಅಕ್ಟೋಬರ್ ೨೪ರಿಂದ ತೆಗೆಯಲಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಇನ್ನಷ್ಟು ಉತ್ತಮವಾಗಿ ನಡೆಸಲು ಹಾಗೂ ಭಕ್ತಾದಿಗಳ ದರ್ಶನಕ್ಕೆ ಅಡಚಣೆ ಆಗದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಂಸದರಾದ ಶ್ರೇಯಸ್ ಎಂ. ಪಟೇಲ್ ಸಭೆಯಲ್ಲಿ ತಿಳಿಸಿದರು.