ಮಂಟೂರ ಏತ ನೀರಾವರಿ ಯೋಜನೆಗೆ ಇಂದು ಚಾಲನೆ
Feb 04 2024, 01:33 AM ISTಬೀಳಗಿ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬೀಳಗಿ ಮತಕ್ಷೇತ್ರವೇನು ಹೊರತಾಗಿಲ್ಲ. ಹೀಗಾಗಿ ಕ್ಷೇತ್ರದಾದ್ಯಂತ ಕೊಳವೆಬಾವಿಗಳು, ಕೆರೆ, ಹಳ್ಳ, ಕೊಳ್ಳಗಳು ಬತ್ತುತ್ತಿವೆ. ಅವುಗಳಿಗೆ ಪುನರುಜ್ಜೀವನ ನೀಡಲು ಮಂಟೂರ ಏತ ನೀರಾವರಿಯಿಂದ ಘಟಪ್ರಭಾ ಎಡದಂಡೆ ಕಾಲುವೆಗಳ ಮೂಲಕ ಫೆ.4 ರಿಂದ 10 ದಿನಗಳ ಕಾಲ ನೀರು ಹರಿಸುವ ಕಾರ್ಯಕ್ಕೆ ಫೆ.4ರಂದು ಬೆಳಗ್ಗೆ 10 ಗಂಟೆಗೆ ಗಲಗಲಿ ಬ್ಯಾರೇಜ್ ಬಳಿ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾಗವಹಿಸಲಿದ್ದಾರೆ ಎಂದು ಎಂದು ಶಾಸಕ ಜೆ.ಟಿ. ಪಾಟೀಲ್ ಹೇಳಿದರು.