ತಮಿಳುನಾಡಿಗೆ ನೀರು; ರೈತರ ಹಿತ ಮರೆತ ಸರ್ಕಾರ: ದೇವೇಗೌಡ
Apr 23 2024, 12:53 AM IST ಈ ೯೨ನೇ ವಯಸ್ಸಿನಲ್ಲೂ ನನ್ನ ಹೋರಾಟ ಮುಂದುವರೆದಿದ್ದು, ತಮಿಳುನಾಡು ನಮ್ಮ ನೀರಾವರಿ ಹಕ್ಕನ್ನು ಕಸಿದುಕೊಳ್ಳುತ್ತಿದೆ. ತಮಿಳುನಾಡಿನ ಅಣತಿಯಂತೆ ನೀರು ಬಿಟ್ಟು ಸಿದ್ದರಾಮಯ್ಯ ಸರ್ಕಾರ ನಮ್ಮ ರೈತರ ಹಿತವನ್ನು ಮರೆತಿದೆ, ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ನೀರಿಗೆ ಹಾಹಾಕಾರವಿದೆ. ಇದರ ಬಗ್ಗೆ ನಾನು ಪ್ರಧಾನಮಂತ್ರಿಯವರ ಬಳಿ ಚರ್ಚಿಸಿದ್ದು, ರಾಜ್ಯಕ್ಕೆ ನ್ಯಾಯದ ಭರವಸೆ ಸಿಕ್ಕಿದೆ. ಇದನ್ನು ಸರಿಪಡಿಸಲು ಶ್ರಮಿಸುತ್ತೇನೆ.