ಕೋಚರಿ ಏತ ನೀರಾವರಿಯಿಂದ ಕೆನಾಲ್‌ಗಳಿಗೆ ಹರಿದ ನೀರು
Apr 12 2024, 01:02 AM ISTಹುಕ್ಕೇರಿ ತಾಲೂಕಿನ ಕೋಚರಿ ಏತ ನೀರಾವರಿ ಯೋಜನೆ ಮೂಲಕ ಗುರುವಾರ ವಿವಿಧ ಗ್ರಾಮಗಳ ಕೆನಾಲ್‌ಗಳಿಗೆ ನೀರು ಹರಿಬೀಡಲಾಯಿತು. ಕೋಚರಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸುಲ್ತಾನಪೂರ, ಶಿರಗಾಂವ, ಬೆಣಿವಾಡ, ಮದಿಹಳ್ಳಿ, ಮದಮಕ್ಕನಾಳ, ಬಸ್ತವಾಡ, ಹುಕ್ಕೇರಿ, ಮಸರಗುಪ್ಪಿ ಕಾಲುವೆಗಳಿಗೆ ನೀರು ಹರಿಬಿಡಲಾಯಿತು. ಇದರಿಂದ ಈ ಪ್ರದೇಶಗಳ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ.