ಕುಶಾಲನಗರ: ಸಾವಿರಾರು ಮನೆಗಳಿಗೆ ನೀರು ಸರಬರಾಜು ಅಬಾಧಿತ
May 03 2024, 01:05 AM ISTಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗೊಂದಿ ಬಸವನಹಳ್ಳಿ ಮತ್ತು ಮಾದಾಪಟ್ಟಣ ಗ್ರಾಮದ ವ್ಯಾಪ್ತಿಯ ಸುಮಾರು 30 ಸಾವಿರ ನಾಗರಿಕರಿಗೆ ನಿತ್ಯ ಟ್ಯಾಂಕರ್ ಬಳಸಿ ನೀರು ಸರಬರಾಜು ಮಾಡಲಾಗುತ್ತಿದೆ. ಕುಶಾಲನಗರ ಪುರಸಭೆಯ ವ್ಯಾಪ್ತಿಯ ಜನರಿಗೆ ತಲಾ ಕನಿಷ್ಠ 100 ಲೀಟರ್ ನಿತ್ಯ ಅವಶ್ಯಕತೆ ಇದೆ. ಇದನ್ನು ಪೂರೈಸುವಲ್ಲಿ ಕುಶಾಲನಗರದ ಪುರಸಭೆ ಯಶಸ್ವಿಯಾಗಿದೆ.