ಜಮೀನು, ಮನೆಗೆ ನುಗ್ಗಿದ ನೀರು: ರೈತರ ಆಕ್ರೋಶ
Jul 22 2024, 01:17 AM ISTಕನ್ನಡಪ್ರಭ ವಾರ್ತೆ ಕೊಲ್ಹಾರ ತಾಲೂಕಿನ ರೋಣಿಹಾಳ ಬಳಿ ಮಲಘಾಣ ರಸ್ತೆಯ ಪಕ್ಕದಲ್ಲಿರುವ ಜಮೀನುಗಳಿಗೆ ಹಾಗೂ ಮನೆಗೆ ಕಾಲುವೆಗೆ ಬಿಟ್ಟಿರುವ ನೀರು ನುಗ್ಗಿದ್ದು, ಬಿತ್ತಿದ ಬೆಳೆ ಜಲಾವೃತಗೊಂಡಿದೆ. ಮನೆಯ ಸುತ್ತ ಮುತ್ತ ನೀರು ನಿಂತು ಜವಳು ಹಿಡಿದಂತಾಗಿದೆ. ಶನಿವಾರ ತಡರಾತ್ರಿ ರೋಣಿಹಾಳ ಹತ್ತಿರದ ಮುಳವಾಡ ಏತ ನೀರಾವರಿ ಕಾಲುವೆಗೆ ನೀರನ್ನು ಹರಿಸಲಾಗಿದೆ. ಕಾಲುವೆ ಮೂಲಕ ಬಿಟ್ಟ ನೀರು ರೋಣಿಹಾಳ ಗ್ರಾಮದ ರೈತರಾದ ನಾಗಯ್ಯ ಹಿರೇಮಠ, ವಿನೋದ ಪಾರಗೊಂಡ ಎಂಬುವರ ಜಮೀನುಗಳಿಗೆ ನುಗ್ಗಿದ ಪರಿಣಾಮ ಮೆಕ್ಕೆಜೋಳ ಬೆಳೆ ಜಲಾವೃತವಾಗಿದೆ.