ಪತ್ರಿಕೆ ಹಂಚುವ ಹುಡುಗರಿಗೆ ರೇನ್ ಕೋಟ್ ವಿತರಣೆ
Aug 20 2025, 01:30 AM ISTಮಳೆಗಾಲ, ಬೇಸಿಗೆ ಅಥವಾ ಚಳಿಗಾಲ ಯಾವ ಋತುವಾಗಿದ್ದರೂ ಬೆಳಿಗ್ಗೆ ನಮ್ಮ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವುದು ಇವರ ನಿರಂತರ ಸೇವಾಭಾವ. ಇವರು ಸುದ್ದಿಗಳ ಹರಿಕಾರರು, ಸಮಾಜಕ್ಕೆ ಜಾಗೃತಿಯ ದಾರಿ ತೋರಿಸುವವರು. ಇವರ ಸೇವೆಯನ್ನು ನಾವು ಎಲ್ಲರೂ ಸ್ಮರಿಸಿ ಗೌರವಿಸಬೇಕು. ಪತ್ರಿಕೆ ಹಂಚುವ ವಿತರಕರ ಸಂಕಷ್ಟಕ್ಕೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಹೇಳಿದರು.