ಮಳೆ ಮುಂದುವರಿದಲ್ಲಿ ಈ ವರ್ಷವೂ ಪ್ರವಾಹ ಗ್ಯಾರಂಟಿ
May 26 2025, 11:58 PM ISTಹೊಳೆನರಸೀಪುರ ತಾಲೂಕಿನಲ್ಲಿ ಕಳೆದ ೨೪ ಗಂಟೆಯಲ್ಲಿ ವಾಡಿಕೆಯಂತೆ ೧೫.೪೦ ಮಿ.ಮೀ. ಮಳೆಯಾಗಬೇಕಿತ್ತು, ಆದರೆ ೧೦೩.೮೦ ಮಿ.ಮೀ. ಮಳೆಯಾಗಿದ್ದು, ೬.೭೪ ಪಟ್ಟು ಹೆಚ್ಚು ಮಳೆಯಾಗಿದೆ ಜತೆಗೆ ಸೋಮವಾರ ಮುಂಜಾನೆ ೬ ಗಂಟೆಗೆ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ೨೮೯೯.೯೦ (೨೮೮೦.೩೧) ಅಡಿಗಳು ಇದ್ದು, ಗರಿಷ್ಠ ಮಟ್ಟ ೨೯೨೨.೦೦ ಅಡಿಗಳಾಗಿದ್ದು, ಇದೇ ರೀತಿ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ್ದಲ್ಲಿ ಈ ವರ್ಷವೂ ಪ್ರವಾಹ ಗ್ಯಾರಂಟಿ, ಆದ್ದರಿಂದ ತಾಲೂಕು ಆಡಳಿತ ಮುಂಜಾಗ್ರತೆ ಕ್ರಮಗಳಿಗೆ ಆದ್ಯತೆ ನೀಡಬೇಕಿದೆ.