ಬೆಂಗಳೂರಿನಲ್ಲಿ ನಕಲಿ ಪತ್ರಕರ್ತರು ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ಟಿವಿ ಚಾನೆಲ್ ಲೋಗೋ ಬಳಸಿ ಅಂಗಡಿಗಳಿಗೆ ನುಗ್ಗಿ ವಿಡಿಯೋ ಮಾಡಿ, ಸ್ವಚ್ಛತೆ ಕೊರತೆ ಆರೋಪಿಸಿ ಲೈಸೆನ್ಸ್ ರದ್ದು ಮಾಡಿಸುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಎಸ್. ರಾವ್ ಅವರನ್ನು ಮತ್ತೆ ಬೆಳಗಾವಿ ಜೈಲಿನಿಂದ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಜೈಲು ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರು ಮ್ಯಾರಥಾನ್ ಭಾನುವಾರ ನಡೆಯಲಿದ್ದು, 30 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ. 41.195 ಕಿ.ಮೀ. ಫುಲ್ ಮ್ಯಾರಥಾನ್, 21.1 ಕಿ.ಮೀ. ಹಾಫ್ ಮ್ಯಾರಥಾನ್, 10ಕೆ ಓಟ ಹಾಗೂ 5ಕೆ ಹೋಪ್ ರನ್ ಸ್ಪರ್ಧೆಗಳು ನಡೆಯಲಿವೆ.