ವಕೀಲರಿಗೆ ಇಂಗ್ಲಿಷ್ ಭಾಷೆ ಬರಲ್ಲ ಎಂಬ ಕೀಳರಿಮೆ ಬೇಡ: ನ್ಯಾ.ಸಚಿನ್ ಶಂಕರ ಮಗದುಮ್ಮ
Feb 11 2024, 01:46 AM ISTರಬಕವಿ-ಬನಹಟ್ಟಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು ಮತ್ತು ವಕೀಲರ ಸಂಘ ರಬಕವಿ-ಬನಹಟ್ಟಿ ಜಂಟಿಯಾಗಿ ಶನಿವಾರ ಆಯೋಜಿಸಿದ್ದ ಯುವ ವಕೀಲರಿಗೆ ತಾಲೂಕು ಮಟ್ಟದ ೩ ದಿನಗಳ ಕಾನೂನು ಕಾರ್ಯಾಗಾರ ಉದ್ಘಾಟಿಸಲಾಯಿತು. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಉಸ್ತುವಾರಿ ನ್ಯಾಯಮೂರ್ತಿ ಸಚೀನ್ ಶಂಕರ ಮಗದುಮ್ಮ ಮಾತನಾಡಿ, ವಕೀಲರಿಗೆ ಇಂಗ್ಲಿಷ್ ಭಾಷೆಯಲ್ಲಿ ವ್ಯವಹರಿಸುವಾಗ ಮತ್ತು ನ್ಯಾಯಾಲಯದಲ್ಲಿ ವಿಷಯ ಮಂಡಿಸುವಾಗ ಯಾವುದೇ ಕೀಳರಿಮೆ ಇರಬಾರದು. ಭಾಷೆ ಸಂವಹನ ಮಾಧ್ಯಮವಾಗಿದ್ದು, ಇಂಗ್ಲಿಷ್ ಭಾಷೆಯ ಸತತ ಅಧ್ಯಯನ ಮತ್ತು ಕಾನೂನು ಪರಿಭಾಷೆಗಳ ಸಮರ್ಥ ಬಳಕೆಯಿಂದ ವಕೀಲರು ಆತ್ಮವಿಶ್ವಾಸದಿಂದ ವಿಷಯ ಮಂಡನೆ ಮಾಡಬೇಕೆಂದರು.