ನಿರಂತರ ಸುರಿದ ಮಳೆಗೆ ಗಿರಿಯಪ್ಪ ಮನೆ ಪ್ರದೇಶದ ಮನೆಗಳು ಜಲಾವೃತ
Aug 21 2024, 12:39 AM ISTಧಾರಕಾರವಾಗಿ ಸುರಿದ ಮಳೆಯ ಆರ್ಭಟಕ್ಕೆ ಸುಂಟಿಕೊಪ್ಪದ ತಗ್ಗು ಪ್ರದೇಶದ ಮಂದಿ ನಿರಂತರವಾಗಿ ಭೀತಿ ಹಾಗೂ ಸಂಕಷ್ಟ ಎದುರಿಸುವಂತಾಗುತ್ತಿದೆ. ಮಂಗಳವಾರ 1 ಗಂಟೆ ಕಾಲ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಯಿತು. ಮಂಗಳವಾರ ಮಧ್ಯಾಹ್ನ 2.45 ರ ಸಂದರ್ಭ ಮಳೆ ಧಾರಕಾರವಾಗಿ 1 ಗಂಟೆ ಸುರಿಯಿತು. ಪರಿಣಾಮ ಗಿರಿಯಪ್ಪ ಮನೆಯ ತಗ್ಗು ಪ್ರದೇಶದಲ್ಲಿರುವ ಚರಂಡಿ ತೊರೆಗಳು ಏಕಕಾಲದಲ್ಲಿ ತುಂಬಿ ಹರಿದವು.