ನರಗುಂದದ ಮೂರು ನವಗ್ರಾಮಗಳಲ್ಲಿ ಮನೆ ಹಂಚಿಕೆಯೇ ಸಮಸ್ಯೆ
Mar 18 2025, 12:31 AM ISTನರಗುಂದ ತಾಲೂಕಿನ ಸುರಕೋಡ, ಕುರ್ಲಗೇರಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾಗೂ ಬೂದಿಹಾಳ ಮಲಪ್ರಭಾ ನದಿ ಪ್ರವಾಹಕ್ಕೆ ಪದೇ ಪದೇ ತುತ್ತಾಗುತ್ತಿದ್ದ ಗ್ರಾಮಗಳಾಗಿದ್ದು, ಇವುಗಳ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರ ವಿಶೇಷ ಕ್ರಮ ತೆಗೆದುಕೊಂಡು ಆಸರೆ ಯೋಜನೆಯಡಿ ಸಂಪೂರ್ಣ ಗ್ರಾಮಗಳ ಸ್ಥಳಾಂತರಕ್ಕಾಗಿ ಸಾವಿರಾರು ಮನೆಗಳನ್ನು ನಿರ್ಮಿಸಿದೆ. ಆದರೆ ಮನೆಗಳ ಹಂಚಿಕೆಯಲ್ಲಾಗುತ್ತಿರುವ ಗೊಂದಲ, ವಿಳಂಬದಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.