ನಸುಕಿನಲ್ಲಿ ಆರ್ಭಟಿಸಿದ ಆಶ್ಲೇಷ ಮಳೆ: ಜನ, ಜಾನುವಾರು ತತ್ತರ
Aug 15 2024, 01:46 AM ISTಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಬುಧವಾರ ನಸುಕಿನಲ್ಲಿ ಏಕಾಏಕಿ ರಣ ಆರ್ಭಟದೊಂದಿಗೆ ಸುರಿದ ಪರಿಣಾಮ ಅನೇಕ ಮನೆಗಳ ಗೋಡೆ ಕುಸಿದು, ನೂರಾರು ಎಕರೆ ಅಡಕೆ, ತೆಂಗು, ಬಾಳೆ ತೋಟಗಳು, ಇತರೆ ಬೆಳೆಗಳು ಜಲಾವೃತವಾಗಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ.