ಉತ್ತಮ ಮಳೆ, ಭರದಿಂದ ಸಾಗಿದೆ ಭತ್ತ ನಾಟಿ ಕಾರ್ಯ
Aug 08 2024, 01:38 AM ISTತಾಲೂಕಿನ ೧೦ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ಕಾರ್ಯ ಭರದಿಂದ ನಡೆಯುತ್ತಿದೆ. ಭತ್ತದ ಕಣಜವಾಗಿದ್ದ ಹಾನಗಲ್ಲ ತಾಲೂಕಿನಲ್ಲಿ ಗೋವಿನ ಜೋಳ ಮುನ್ನಡೆ ಸಾಧಿಸಿದ್ದರೂ ಒಂದೂವರೆ ತಿಂಗಳ ಮಳೆಗೆ ಜೌಗು ಹಿಡಿದು ಚೇತರಿಸಿಕೊಳ್ಳದ ಸ್ಥಿತಿಯಲ್ಲಿದೆ. ಇಲ್ಲಿ ಜುಲೈ ತಿಂಗಳಿನ ವಾಡಿಕೆ ಮಳೆ ೨೯೯ ಮಿಮೀ, ಆದರೆ ಬಿದ್ದ ಮಳೆ ೫೦೪ ಮಿಮೀ, ಸರಾಸರಿ ೧೬೮ ಮಿಮೀ ಆಗಿದೆ.