ಗುಬ್ಬಿ ತಾಲೂಕಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ
May 08 2024, 01:01 AM ISTಗುಬ್ಬಿ ತಾಲೂಕಿನ ತ್ಯಾಗಟೂರು, ಮುದ್ದಪುರ, ಎಂ.ಎನ್. ಕೋಟೆ , ಅಳಿಲುಘಟ್ಟ ,ಹೊಸಕೆರೆ ,ಚೇಳೂರು ,ನಿಟ್ಟೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ತಿಂಗಳಿನಿಂದ ಬಿಸಿಲಿಗೆ ತತ್ತರಿಸಿದ ಜನತೆಗೆ ಈಗ ಮಳೆ ಬಂದು ಕೊಂಚ ನೆಮ್ಮದಿ ತರಿಸಿದ್ದು, ಮೇವಿಲ್ಲದೇ ಕೊರಗುತ್ತಿದ್ದ ಜಾನುವಾರುಗಳಿಗೆ,ನೀರಿಲ್ಲದೇ ಒಣಗುತ್ತಿದ್ದ ರೈತರ ತೋಟಗಳಿಗೆ ಕೊನೆಗೂ ಮಳೆರಾಯ ಕೈ ಹಿಡಿದ್ದಿದಾನೆ.