ಮಂಡ್ಯ ಜಿಲ್ಲೆಯಲ್ಲಿ ವಾರದಲ್ಲಿ ೬೬.೧ ಮಿ.ಮೀ. ಮಳೆ...!
May 15 2024, 01:32 AM ISTಮಂಡ್ಯ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ೨೪ ಗಂಟೆಗಳಲ್ಲಿ ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ೭೨.೯ ಮಿ.ಮೀ. ಮಳೆಯಾಗಿದ್ದರೆ, ಕಳೆದೊಂದು ವಾರದಿಂದ ೧೨೮.೮ ಮಿ.ಮೀ. ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ನಾಗಮಂಗಲ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದ್ದು, ೨೪ ಗಂಟೆಗಳಲ್ಲಿ ೫.೧ ಮಿ.ಮೀ. ಮಳೆಯಾಗಿದ್ದರೆ, ಕಳೆದೊಂದು ವಾರದಿಂದ ೩೪ ಮಿ.ಮೀ.ನಷ್ಟು ಮಳೆಯಾಗಿದೆ.