ಬಿಜೆಪಿಗರಿಗೆ ಹನುಮ, ರಾಮ ಬೇಕಿಲ್ಲ, ಮತ ಬೇಕಿದೆ: ಸಚಿವ ಆರ್. ಬಿ. ತಿಮ್ಮಾಪುರ
Jan 31 2024, 02:21 AM ISTಬಾಗಲಕೋಟೆ: ಈ ದೇಶದಲ್ಲಿ ಕೆಲವರಿಂದ ಕಿಡಿಗೇಡಿತನ ಕೆಲಸಗಳು ನಡೆಯುತ್ತಿವೆ. ಚುನಾವಣೆ ಬಂದಾಗ ಕೋಮು ಗಲಭೆ, ಜಾತಿ ಗಲಭೆ ಎಬ್ಬಿಸಿ ಆ ಮೂಲಕ ಲಾಭ ಪಡೆಯಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಬ್ಯಾನರ್‌ಗಳಿಗೆ ಕಲ್ಲೆಸೆತದ ಘಟನೆ ಪ್ರಸ್ತಾಪಿಸಿ ಮಾತನಾಡಿದರು.