ಮೂಡುಬಿದಿರೆಯಲ್ಲಿ ರಾಮ ಜಪ, ಕಥಾ, ಉತ್ಸವ
Jan 22 2024, 02:15 AM ISTಅಯೋಧ್ಯೆಯಲ್ಲಿ ಜ.೨೨ರಂದು ರಾಮ ಪ್ರಾಣಪ್ರತಿಷ್ಠಾ ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಪೇಟೆಯ ತುಂಬೆಲ್ಲ ರಾಮ ಸಂಭ್ರಮ ಮನೆ ಮಾಡಿದೆ. ದೇವಾಲಯಗಳು ವಿದ್ಯುತ್ ದೀಪಾಲಂಕೃತಗೊಂಡಿದ್ದು, ಪರಿಸರ ಕೇಸರಿ ಧ್ವಜ, ಪತಾಕೆ, ಫ್ಲೆಕ್ಸುಗಳಿಂದ ರಾರಾಜಿಸುತ್ತಿದೆ. ಕಳೆದೆರಡು ವಾರಗಳಿಂದಲೇ ಪೇಟೆಯ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಪರಿಸರದಲ್ಲಿ ರಾಮ ಸಂಭ್ರಮ ಗರಿಗೆದರಿದೆ.