ಹೋರಾಟ ಮಾಡುತ್ತಲೇ ಮಡಿದ ರೈತ ಹುತಾತ್ಮರನ್ನು ಮರೆಯದಿರಿ: ಸುನೀತಾ ಪುಟ್ಟಣ್ಣಯ್ಯ
Jul 22 2024, 01:17 AM ISTರಾಜ್ಯದಲ್ಲಿ ಆಡಳಿತ ನಡೆಸಿದ ಅನೇಕ ಸರ್ಕಾರಗಳು ಕೈಗೊಳ್ಳುತ್ತಿದ್ದ ಕೆಲ ರೈತ ವಿರೋಧಿ ತೀರ್ಮಾನಗಳನ್ನು ಖಂಡಿಸುವ ಹೋರಾಟದಲ್ಲಿ ಭಾಗಿಯಾಗಿ ಸಾಕಷ್ಟು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ನೂರಾರು ರೈತ ಚಳವಳಿಗಾರರು ನಮ್ಮಿಂದ ದೂರವಾಗಿದ್ದಾರೆ. ಹೋರಾಟದ ಮೂಲಕ ಚಳವಳಿಗಳಿಗೆ ಶಕ್ತಿ ತುಂಬಿದ ಇಂತಹ ಮಹಾನುಭಾವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.