ಮಿಶ್ರ ಬೆಳೆಯೊಂದಿಗೆ ಕೃಷಿಯಲ್ಲಿ ಯಶಸ್ಸು ಕಂಡ ರೈತ
Jun 22 2025, 11:48 PM ISTಹಾರೋಹಳ್ಳಿ ಪಟೇಲ್ ನಂಜಪ್ಪ ಅವರ ಮೂವರು ಪುತ್ರರಲ್ಲಿ ಒಬ್ಬರಾಗಿರುವ ಮಧು, ಎಂಕಾಂ ಓದಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಕತ್ತಿಮಲ್ಲೇನಹಳ್ಳಿ ಗ್ರಾಪಂ ಕರವಸೂಲಿದಾರರಾಗಿ ಕೆಲಸ ಮಾಡುತ್ತಿರುವ ಇವರು ತಮ್ಮ ವೃತ್ತಿಯೊಂದಿಗೆ ಕೃಷಿಯನ್ನು ಕೈಬಿಟ್ಟಿಲ್ಲ. ವ್ಯವಸಾಯದ ಮೇಲೆ ಇಚ್ಛಾಶಕ್ತಿ ವಹಿಸಿ ಕುಟುಂಬದವರ ನೆರವಿನೊಂದಿಗೆ ವಿವಿಧ ಬೆಳೆಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಅಪಾರ ಆಸಕ್ತಿ ವಹಿಸಿ ಮಿಶ್ರ ಬೆಳೆಗಳನ್ನು ಬೆಳೆದು ಯಶಸ್ವಿ ಕೃಷಿಕನಾಗಿ ಹೊರಹೊಮ್ಮಿದ್ದಾರೆ.