ನರಸಿಂಹರಾಜಪುರ ರೈತ ಸೇವಾ ಕೇಂದ್ರಕ್ಕೆ ₹2 ಕೋಟಿ ಮಂಜೂರು: ಟಿ.ಡಿ.ರಾಜೇಗೌಡ

Dec 31 2024, 01:02 AM IST
ನರಸಿಂಹರಾಜಪುರ, ತಾಲೂಕಿನಲ್ಲಿ ರೈತ ಸೇವಾ ಕೇಂದ್ರಕ್ಕೆ ಸರ್ಕಾರ ₹2 ಕೋಟಿ ಮಂಜೂರು ಮಾಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಸೋಮವಾರ ಕೃಷಿ ಇಲಾಖೆ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜಕ್ಕೆ ಆಯ್ಕೆಯಾದ 5 ಜನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿ, ರೈತರ ಅನುಕೂಲಕ್ಕಾಗಿ ರೈತ ಸೇವಾ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಸರ್ಕಾರ ರೈತರ ಪರವಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದು ಇದನ್ನು ಪಕ್ಷಾತೀತವಾಗಿ ಕಟ್ಟ ಕಡೆಯ ರೈತರಿಗೂ ತಲುಪಿಸುವ ಜವಾಬ್ದಾರಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜಕ್ಕೆ ಸೇರಿದೆ. ರೈತರ ಅನುಕೂಲಕ್ಕೆ ಸರ್ಕಾರದಿಂದ ಅನುದಾನ ತಂದು ಕೊಡುವ ಭರವಸೆ ನೀಡಿದರು.