ಸುಟ್ಟ ಟಿಸಿ ಬದಲಿಸಲು ಬೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
Jan 22 2025, 12:35 AM ISTತಾಲೂಕಿನ ತಳಕು ಹೋಬಳಿಯ ಘಟಪರ್ತಿ, ವಲಸೆ, ಚನ್ನಗಾನಹಳ್ಳಿ, ಹೊನ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಟ್ರಾನ್ಸ್ಫಾರ್ಮರ್ಗಳು ಸುಟ್ಟು ತಿಂಗಳು ಕಳೆಯುತ್ತಿದೆ. ಆದರೂ ಅವುಗಳನ್ನು ಬದಲಿಸದೇ ಬೆಸ್ಕಾಂನ ತಳಕು ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ವತಿಯಿಂದ ಸೋಮವಾರ ಚಳ್ಳಕೆರೆಯಲ್ಲಿ ಪ್ರತಿಭಟನೆ ನಡೆಯಿತು.