ಲೋಕಾಯುಕ್ತ ಅಧಿಕಾರಿ ಎಂದ್ಹೇಳಿ ಮಹಿಳಾ ಅಧಿಕಾರಿಗೆ 1 ಲಕ್ಷ ರು. ವಂಚನೆ!
Feb 17 2024, 01:18 AM ISTಮಹಿಳಾ ಆಫೀಸರ್ಗೆ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ, ₹1 ಲಕ್ಷ ಹಣ ವಂಚನೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಆಹಾರ ಇಲಾಖೆಯಲ್ಲಿ ಶಿರಸ್ತೇದಾರ್ ಆಗಿರುವ ಮಹಿಳಾ ಅಧಿಕಾರಿಯೊಬ್ಬರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಆಗಮಿಸಿದ್ದರು. ಈ ಸಂದರ್ಭ ವಾಟ್ಸಪ್ನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಲೋಕಾಯುಕ್ತ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡು, ವಂಚಿಸಿದ್ದಾನೆ.