ಹೊನ್ನಾಳಿಯಲ್ಲಿ 138 ಲೀ. ಅಕ್ರಮ ಮದ್ಯ, ವಾಹನ ವಶ: ಬಸವಲಿಂಗಪ್ಪ
Apr 06 2024, 12:45 AM ISTಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಡಾವಣೆಯಲ್ಲಿ ಆಪೇ ಆಟೋದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆಟೋವನ್ನು ವಶಕ್ಕೆ ಪಡೆಯಲಾಗಿದೆ. 138 ಲೀಟರ್ ಬಿಯರ್ ವಶಕ್ಕೆ ಪಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ ಎಂದು ಅಬಕಾರಿ ಇನ್ಸ್ಪೆಕ್ಟರ್ ಬಸವಲಿಂಗಪ್ಪ ಚಿಮ್ಮಲಗಿ ಹೇಳಿದ್ದಾರೆ.