ವಾಹನ ಚಾಲಕರ ಆಪದ್ಭಾಂಧವ ನೆಕ್ಕಿಲಾಡಿ ಜಯರಾಮಣ್ಣ
Mar 14 2024, 02:03 AM ISTಮುಂಜಾನೆ ೮ ಗಂಟೆಗೆ ಅಂಗಡಿ ತೆರೆಯುವ ನಾನು, ರಾತ್ರಿ ೧೨.೩೦ ರ ವರೆಗೂ ಸೇವೆ ನೀಡುತ್ತೇನೆ. ಅತಂತ್ರರಾಗಿ ಬರುವ ಮಂದಿ, ತೃಪ್ತಿಯಿಂದ ಹೋಗುವ ದೃಶ್ಯಗಳೇ ನನಗೆ ಆತ್ಮ ಸಂತೋಷವನ್ನು ನೀಡುತ್ತಿದೆ. ಪ್ರಸಕ್ತ ನನಗೆ ೬೦ ವರ್ಷವಾಗಿದೆ. ಇನ್ನೂ ೨೦ ವರ್ಷ ಈ ಸೇವೆಯನ್ನು ಮಾಡಲು ದೇವರು ಅವಕಾಶ ಕೊಟ್ಟಾನು ಎಂಬ ನಂಬಿಕೆ ನನಗಿದೆ ಎನ್ನುತ್ತಾ ತನ್ನ ಕಾರ್ಯದಲ್ಲಿ ತೊಡಗುತ್ತಾರೆ ಜಯರಾಮಣ್ಣ.