ಬಿಜೆಪಿ ಪಕ್ಷ ನಿಷ್ಠೆ ಬಗ್ಗೆ ಟಿಕೆಟ್ ವಂಚಿತ ಡೀವಿ ಹಳೆ ಹೇಳಿಕೆ ವಿಡಿಯೋ ವೈರಲ್
Mar 21 2024, 01:04 AM ISTಈ ಹಿಂದೆ ಅಸೆಂಬ್ಲಿ ಚುನಾವಣೆಯಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದರು. ಆಗ ಡಿ.ವಿ.ಸದಾನಂದ ಗೌಡ ಅವರನ್ನು ಪುತ್ತೂರಿಗೆ ಕರೆಸಿದ ಬಿಜೆಪಿ ಮುಖಂಡರು, ಅವರಿಂದ ಸುದ್ದಿಗೋಷ್ಠಿ ನಡೆಸಿದ್ದರು. ಆಗ ಡೀವಿ ಅವರು ಬಿಜೆಪಿ ನೀಡಿದ್ದ ಕೊಡುಗೆಗಳ ಬಗ್ಗೆ ಹಾಡಿ ಹೊಗಳಿದ್ದರು. ಅಲ್ಲದೆ, ತನ್ನ ಪಕ್ಷ ನಿಷ್ಠೆ ಬಗ್ಗೆ ಹೇಳಿಕೊಂಡಿದ್ದರು. ಅದರ ತುಣುಕು ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.