ಕೇವಲ ೧೩ ಸೆಕೆಂಡ್ ವಿಡಿಯೋ ತುಣುಕು ಕೊಟ್ಟಿತು ಶಿಕ್ಷಕಿಯ ಕೊಲೆಯ ಸುಳಿವು...!
Jan 24 2024, 02:03 AM ISTಖಾಸಗಿ ಶಾಲಾ ಶಿಕ್ಷಕಿ ದೀಪಿಕಾಗೆ ಮನಸೋಇಚ್ಛೆ ಥಳಿಸುತ್ತಿದ್ದ ಯುವಕ, ಪ್ರವಾಸಿಗರು ಸೆರೆಹಿಡಿದಿದ್ದ ವಿಡಿಯೋ; ಆರೋಪಿ ಪರಾರಿ, ಕೊಲೆ ಶಂಕೆ ವ್ಯಕ್ತವಾಗಿರುವ ನಿತೀಶ್ ಆಕೆಯನ್ನು ಅಕ್ಕ.. ಅಕ್ಕ.. ಎಂದೇ ಕರೆಯುತ್ತಿದ್ದನು ಎಂದು ಹೇಳಲಾಗಿದೆ. ಆದರೆ, ದೀಪಿಕಾ ಶವ ಸಿಗುತ್ತಿದ್ದಂತೆ ನಿತೀಶ್ ತಲೆಮರೆಸಿಕೊಂಡಿದ್ದಾನೆ. ನನ್ನನ್ನು ಹುಡುಕಬೇಡಿ, ನಾನು ತಪ್ಪು ಮಾಡಿದ್ದೇನೆ. ಅಕ್ಕನಿಗೆ ಮದುವೆ ಮಾಡಿ ಎಂದು ಸಂದೇಶ ಕಳುಹಿಸಿ ಪರಾರಿಯಾಗಿದ್ದಾನೆ.