ಶ್ರದ್ಧೆ, ಆಸಕ್ತಿಯಿಂದ ಓದಿದರೆ ಖಂಡಿತ ಯಶಸ್ಸು ಸಾಧ್ಯ: ಶಾಸಕ ಎಚ್.ಟಿ.ಮಂಜು
Feb 14 2024, 02:19 AM ISTಪೋಷಕರು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸುತ್ತಿರುವುದು ಸಂತಸದ ವಿಷಯವಾಗಿದೆ. ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಹಲವು ಮಂದಿ ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು, ಕೀರ್ತಿ ತಂದಿದ್ದಾರೆ. ಅದರಂತೆ ನೀವುಗಳೂ ಸಹ ಚೆನ್ನಾಗಿ ಓದಿ ನಿಮ್ಮ ಗ್ರಾಮಕ್ಕೆ, ತಾಲೂಕಿಗೆ ಕೀರ್ತಿ ತರುವ ಕೆಲಸ ಮಾಡಬೇಕು.