ಅದ್ದೂರಿ ಹುಟ್ಟುಹಬ್ಬಆಚರಣೆ ಬೇಡ: ಶಾಸಕ ಗಣೇಶ್ ಪ್ರಸಾದ್

Dec 05 2023, 01:30 AM IST
ಮುಂಬರುವ ಡಿ.26 ರಂದು ನನ್ನ ಹುಟ್ಟುಹಬ್ಬ ಆಚರಣೆಗೆ ಕ್ಷೇತ್ರದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ತಯಾರಿ ನಡೆಸುತ್ತಿರುವುದು ಗಮನಕ್ಕೆ ಬಂದ ಕಾರಣ ಅದ್ದೂರಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮನವಿ ಮಾಡಿದ್ದಾರೆ.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ಆವರಿಸಿದೆ. ಕ್ಷೇತ್ರದ ಜನ ಬರ ಎದುರಿಸುವ ಸಮಯದಲ್ಲಿ ಹುಟ್ಟುಹಬ್ಬಕ್ಕೆ ನನ್ನ ವಿರೋಧವಿದೆ ಎಂದರು.ಬಡವರು, ಮಕ್ಕಳಿಗೆ ನೆರವಾಗಿ:ನನ್ನ ಹುಟ್ಟುಹಬ್ಬಕ್ಕೆ ಶಾಲು,ಹಾರ,ಉಡುಗೊರೆಯ ಜೊತೆಗೆ ಕೇಕ್ ಕಟಿಂಗ್ ಮತ್ತು ಬ್ಯಾನರ್ ಗಳಿಗೆ ಕೊಡುವ ಹಣವನ್ನು ಬಡವರು ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವಂತೆ ಕಿವಿಮಾತು ಹೇಳಿದರು.