ಒಂದು ಸಮುದಾಯ ಗುರಿಯಾಗಿಸಿಕೊಂಡು ಜಾತಿ ಗಣತಿ -ಶಾಸಕ ಸಿಸಿಪಾ
Dec 23 2023, 01:45 AM ISTಜಾತಿ ಜನಗಣತಿಯನ್ನು ನಾಲ್ಕು ಗೋಡೆ ಮಧ್ಯೆ ನಡೆಸಲಾಗಿದೆ. ಅದರಲ್ಲಿಯೂ ಲಿಂಗಾಯತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಗಣತಿ ಮಾಡಿದ್ದು, ಅದನ್ನು ಬಲವಾಗಿ ವಿರೋಧಿಸುತ್ತೇವೆ. ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಸಹಿ ಸಂಗ್ರಹ ಚಳವಳಿ ಆರಂಭವಾಗಿದೆ. ನಾನು ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಜಾತಿ ಗಣತಿ ವಿರೋಧಿಸಿ ಸಹಿ ಹಾಕಿದ್ದೇವೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.