ವಿಜ್ಞಾನ ಸಮುದ್ರವಿದ್ದಂತೆ, ಕಲಿತಂತೆ ಆಳ ಹೆಚ್ಚು: ಶಾಸಕ
Nov 24 2023, 01:30 AM ISTವಿಜ್ಞಾನ ವಿಷಯ ಸಮುದ್ರವಿದ್ದಂತೆ, ನಾವು ಎಷ್ಟೇ ಕಲಿತರೂ ಅದರ ಆಳ ಹೆಚ್ಚು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ತಾಲೂಕಿನ ಬೇಗೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಹೊರ ಬಂದ ಮಾಹಿತಿಯನ್ನು ತರಬೇತಿಗೆ ಬಂದ ಶಿಕ್ಷಕರು ಮಕ್ಕಳೊಂದಿಗೆ ಹಂಚಿಕೊಂಡು ಹೆಚ್ಚಿನ ಅಂಕಗಳಿಸಲು ತಯಾರಿಸಬೇಕು ಎಂದರು.